Monday 11 August 2014

ಸಾಕ್ಷರ – 2014


ಶಾಲಾ ಮಟ್ಟದ ಸಾಕ್ಷರ – 2014” ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 06-08-2014 ರಂದು ನಡೆಯಿತು. ಶಾಲಾ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ . ಕೆ. ಅಬ್ದುಲ್ಲ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಾ, ಅಧ್ಯಾಪಕ ಶ್ರೀ ರೂಪೇಶ್ ಯನ್. ಯನ್., ಅಧ್ಯಾಪಿಕೆ ಶ್ರೀಮತಿ ಮಂಜುಳಾ ಡಿ. ಆರ್., ವಿದ್ಯಾರ್ಥಿಗಳ ರಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ಪಲ್ಲವಿ ಕೆ. ಸ್ವಾಗತಿಸಿದರು. ಸಾಕ್ಷರ – 2014” ರ ಕೈಪಿಡಿಯನ್ನು ಪರಿಚಯಿಸಿ ಅಧ್ಯಕ್ಷರಿಗೆ ನೀಡಿದರು. ಶಾಲಾ ಮಟ್ಟದಲ್ಲಿ ಸದ್ರಿ ಯೋಜನೆಯನ್ನು ಕಾರ್ಯಗತಗೊಳಿಸುವ ಕುರಿತು ಎಸ್. ಆರ್. ಜಿ. ಸಂಚಾಲಕಿ ಶ್ರೀಮತಿ ವನಿತಾ ಕೆ. ಯಂ. ಮಾಹಿತಿ ನೀಡಿದರು. ಮಧ್ಯಾಹ್ನದ ಊಟದ ವಿರಾಮದ ವೇಳೆಯಲ್ಲಿ [ಗಂಟೆ 1 ರಿಂದ 2] ಈ ತರಗತಿಯನ್ನು ನಡೆಸಲಾಗುವುದೆಂದು ತಿಳಿಸಿದರು. ಅಧ್ಯಾಪಕ ಶ್ರೀ ಸತ್ತಾರ್ ಕೆ. ಯಂ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

No comments:

Post a Comment